ವ್ಯಾಪಾರದ ಬೆಳವಣಿಗೆಯ ನಿಯಮಗಳು ಮತ್ತು ಷರತ್ತುಗಳು

ವ್ಯಾಪಾರದ ಬೆಳವಣಿಗೆಯ ನಿಯಮಗಳು ಮತ್ತು ಷರತ್ತುಗಳು

1.

ನಾನು ಬ್ಯಾಂಕ್ ನ ನಿಯಮಗಳಿಗೆ ಮತ್ತು ಷರತ್ತುಗಳಿಗೆ ಬದ್ಧನಾಗಲು ಮತ್ತು ನನ್ನ ಖಾತೆಗೆ ತಿಳಿಸಿದಂತೆ ಬ್ಯಾಂಕ್ ನ ವೆಬ್ಸೈಟ್ ನಲ್ಲಿ ಕಾಲ ಕಾಲಕ್ಕೆ ಜಾರಿಯಲ್ಲಿರುವ ಬದಲಾಗುವ ನಿಯಮಗಳಿಗೆ ಮತ್ತು ಷರತ್ತುಗಳಿಗೆ ಒಪ್ಪುತ್ತೇನೆ.

2.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಖಾತೆ ತೆರೆಯುವ ಮತ್ತು ನಿರ್ವಹಣೆಗೆ ಕಾಲ ಕಾಲಕ್ಕೆ ಪರಿಚಯಿಸಲ್ಪಟ್ಟ ಮತ್ತು ಸರಿಪಡಿಸಲ್ಪಟ್ಟ ನಿಯಮಗಳಿಗೆ ಮತ್ತು ಷರತ್ತುಗಳಿಗೆ ನಾನು ಒಪ್ಪುತ್ತೇನೆ.

3.

ಬ್ಯಾಂಕ್ ನ ಯಾವುದೇ ಠೇವಣಿ ಖಾತೆ ತೆರೆಯುವ ಮುನ್ನ, ಬ್ಯಾಂಕ್ ನ Know Your Customer ಮಾರ್ಗಸೂಚಿಗಳ ಅಡಿಯಲ್ಲಿ ಆಚರಣೆಗೆ ತರಲು ಸರಿಯಾದ ಪರಿಶ್ರಮದ ಅಗತ್ಯವಿರುತ್ತದೆ ಎಂದು ನಾನು ಒಪ್ಪುತ್ತೇನೆ. ನಾನು ಸಲ್ಲಿಸುವ ಅಗತ್ಯವಿರುವ ದಾಖಲೆಗಳು ಅಥವಾ ಪುರಾವೆಗಳು, ಉದಾಹರಣೆಗೆ ಗುರುತು, ವಿಳಾಸ, ಫೋಟೊ ಮತ್ತು ಅಂತಹ ಯಾವುದೇ ಮಾಹಿತಿ KYC, AML ಅಥವಾ ಇತರ ಶಾಸನಬದ್ಧ /ನಿಯಂತ್ರಕ ಆವಶ್ಯಕತೆಗಳನ್ನು ಪೂರೈಸಲು ಅಗತ್ಯವಿರುತ್ತದೆ.

ಇದಲ್ಲದೆ, ಖಾತೆ ತೆರೆದ ನಂತರ, ಅಸ್ತಿತ್ವದಲ್ಲಿರುವ ನಿಯಂತ್ರಕ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಬ್ಯಾಂಕಿಗೆ ಅಗತ್ಯವಿರುವಂತೆ ಆವರ್ತಿಸುವ, ಮಧ್ಯಂತರಗಳಲ್ಲಿ ಮೇಲಿನ ದಾಖಲೆಗಳನ್ನು ನಾನು ಸಲ್ಲಿಸಲು ಒಪ್ಪುತ್ತೇನೆ.

4.

ಬ್ಯಾಂಕ್ ಅದರ ವಿವೇಚನೆಗೆ, ಬಿಸಿನೆಸ್ ಫೆಸಿಲಿಟೇಟರ್ಸ್ (ಇನ್ನು ಮುಂದೆ ಇದನ್ನು  "BF " ಎಂದು ಉಲ್ಲೇಖಿಸಲಾಗುವದು) ಸೇವೆಗಳಿಗೆ ತೊಡಗಿಸಿಕೊಳ್ಳಲು ಮತ್ತು ಬಿಸಿನೆಸ್ ಕರೆಸ್ಪಾನ್ದೆಂಟ್ಸ್ (ಇನ್ನು ಮುಂದೆ ಇದನ್ನು  "BC" ಎಂದು ಉಲ್ಲೇಖಿಸಲಾಗುವದು) ಬ್ಯಾಂಕಿಂಗ್ ಮತ್ತು ಹಣಕಾಸು ಸೇವಗಳ ವಿಸ್ತರಣೆಗಾಗಿ ಹೆಚ್ಚಿನ ಆರ್ಥಿಕ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬ್ಯಾಂಕಿಂಗ್ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸಲು ಸಾಧ್ಯತೆ ಇರಬಹುದು ಎಂದು ನಾನು ಒಪ್ಪುತ್ತೇನೆ. ಆದಾಗ್ಯೂ, ಅಂತಹ BC ಮತ್ತು BF ನ ಕೃತ್ಯಗಳು ಮತ್ತು ಲೋಪಗಳಿಗೆ ಬ್ಯಾಂಕ್ ಜವಾಬ್ದಾರವಾಗಿರುತ್ತದೆ.

5.

ಸಾಮಾನ್ಯ ಸಂದರ್ಭಗಳಲ್ಲಿ, ಯಾವುದೇ ಸಮಯ ನನಗೆ ಕನಿಷ್ಠ 30 ದಿನಗಳ ಸೂಚನೆಯನ್ನು ನೀಡುತ್ತ ನನ್ನ ಖಾತೆಯನ್ನು ಮುಚ್ಚಲು ಬ್ಯಾಂಕ್ ಗೆ ಸ್ವಾತಂತ್ರ್ಯವಿರುತ್ತದೆ. ಆದರೂ, ಸರಾಸರಿ ಮಾಸಿಕ/ತ್ರೈಮಾಸಿಕ ಬಾಕಿಯನ್ನು ಪಾಲಿಸಲು ಸಾಧ್ಯವಿಲ್ಲದಿದ್ದಲ್ಲಿ, ಮುನ್ಸೂಚನೆ ನೀಡದೆ ನನ್ನ ಖಾತೆಯನ್ನು ಮುಚ್ಚಲು ಬ್ಯಾಂಕ್ ಗೆ ಸಂಪೂರ್ಣ ಅಧಿಕಾರವಿರುತ್ತದೆ ಎಂದು ನಾನು ಒಪ್ಪುತ್ತೇನೆ.

6.

ಬ್ಯಾಂಕ್ ಅದರ ಏಕೈಕ ವಿವೇಚನೆಯೊಂದಿಗೆ, ನನ್ನ ಖಾತೆಯಲ್ಲಿ ಯಾವುದೇ ಸಮಯ ಸಂಪೂರ್ಣವಾಗಿ ಅಥವಾ ಭಾಗಶಃ ನೀಡಿದ ಯಾವುದೇ ಸೇವೆಗಳು/ಸೌಲಭ್ಯಗಳನ್ನು ತಿದ್ದುಪಡಿ ಮಾಡಲು ನನಗೆ ಕನಿಷ್ಠ 30 ದಿನಗಳ ಸೂಚನೆಯನ್ನು ನೀಡುತ್ತ ಮತ್ತು/ಅಥವಾ ಇತರ ಸೇವೆಗಳು/ಸೌಲಭ್ಯಗಳನ್ನು ಬದಲಾಯಿಸಲು ಆಯ್ಕೆಯನ್ನು ಒದಗಿಸುವುದು ಎಂದು  ನಾನು ಒಪ್ಪುತ್ತೇನೆ.

7.

ನನ್ನ ಖಾತೆಯ ಸ್ಟೇಟಸ್ ನಲ್ಲಿ ಯಾವುದೇ ಬದಲಾವಣೆ ಅಥವಾ ವಿಳಾಸದಲ್ಲಿ ಬದಲಾವಣೆ ಆಗಿದ್ದಲ್ಲಿ ತಕ್ಷಣವೇ ಬ್ಯಾಂಕಿಗೆ ಸೂಚನೇ ನೀಡುವೆನು, ಆದರೆ ನನಗೆ ಯಾವುದೇ ಸಂಪರ್ಕ ಮಾಡುವುದರಲ್ಲಿ/ತಲುಪಲು ವಿಫಲಗೊಂಡಲ್ಲಿ ಅಥವಾ ಅದೇ ನನ್ನ ಹಳೆಯ ವಿಳಾಸಕ್ಕೆ ಕಳುಹಿಸಿದಾಗ ನಾನು  ಬಾಧ್ಯನಾಗಿರುತ್ತೇನೆ ಎಂದು ನಾನು ಒಪ್ಪುತ್ತೇನೆ.

8.

ಬ್ಯಾಂಕ್ ಸ್ವೀಕರಿಸುವ ಸಂಪರ್ಕ ವಿಧಾನದ ಪ್ರಕಾರ ನನ್ನ ಖಾತೆಗೆ ಸಂಬಂಧಿಸಿದ ಎಲ್ಲಾ ಸೂಚನೆಗಳು ಬ್ಯಾಂಕಿಗೆ ಒದಗಿಸಿರುತ್ತದೆ ಎಂದು ನಾನು ಒಪ್ಪುತ್ತೇನೆ.

9.

ನನ್ನ ಚೆಕ್ ಬುಕ್ /ಎಟಿಎಂ ಕಾರ್ಡ್ ಎಚ್ಚರಿಕೆಯಿಂದ ಕಾಪಾಡಿಕೊಳ್ಳುತ್ತೇನೆ ಎಂದು ಒಪ್ಪುತ್ತೇನೆ. ಕಳೆದುಕೊಂಡ/ ಕಳ್ಳತನ ಆಗಿದ್ದ ಸಂದರ್ಭದಲ್ಲಿ ನಾನು ತಕ್ಷಣವೇ ಬ್ಯಾಂಕಿಗೆ ಲಿಖಿತವಾಗಿ ಸೂಚಿಸುವೆನು.

10.

ಕಾಲ ಕಾಲಕ್ಕೆ ಬ್ಯಾಂಕ್  ನಿಂದ ನಿಗದಿಪಡಿಸುವ ಕನಿಷ್ಠ ಬ್ಯಾಲನ್ಸ್ ನನ್ನ ಖಾತೆಯಲ್ಲಿ ಪಾಲಿಸಲು ನಾನು ಒಪ್ಪುತ್ತೇನೆ. 

11.

ಅನ್ವಯವಾಗುವ ಎಲ್ಲಾ ಶುಲ್ಕಗಳು, ಬಡ್ಡಿಗಳು, ವೆಚ್ಚಗಳಿಗೆ ಪಾವತಿಸಲು ನಾನು ಜವಾಬ್ದಾರನಾಗಿರುತ್ತೇನೆ, ಇದು ನನ್ನ ಖಾತೆಗೆ ಸಂಬಂಧಿಸಿದಂತೆ ಅಥವಾ ಯಾವುದೇ ವಹಿವಾಟು ಅಥವಾ ಯಾವುದೇ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ವಿಧಿಸಬಹುದು ಹಾಗೂ ಅದನ್ನು ನನ್ನ ಖಾತೆಗೆ ಡೆಬಿಟ್ ಮೂಲಕ ವಸೂಲಿ ಮಾಡಬಹುದು ಎಂದು ಒಪ್ಪುತ್ತೇನೆ. ಸಾಕಷ್ಟು ಹಣ ಲಭ್ಯವಿಲ್ಲದ ಸಂದರ್ಭದಲ್ಲಿ ಸಂಪೂರ್ಣ ಮೊತ್ತವನ್ನು ಮರುಪಡೆಯುವವರೆಗೆ ಶುಲ್ಕವು ಖಾತೆಗೆ ಡೆಬಿಟ್ ಮಾಡಲಾಗುವುದು ಎಂದು ಒಪ್ಪುತ್ತೇನೆ ಮತ್ತು  ಅಂಗಿಕರೀಸುತ್ತೇನೆ.

12.

ಖಾತೆಯಲ್ಲಿ ಸರಾಸರಿ ಮಾಸಿಕ/ತ್ರೈಮಾಸಿಕ ಬಾಕಿಯನ್ನು ಪಾಲಿಸಲು ಸಾಧ್ಯವಿಲ್ಲದೆ ಇದ್ದಲ್ಲಿ ಗ್ರಾಹಕರಿಗೆ ಚೆಕ್ ಬುಕ್ ಗಳು, ತಾತ್ಕಾಲಿಕ ಹೇಳಿಕೆಗಳು, ಫೋನ್ ಬ್ಯಾಂಕಿಂಗ್, ಟಿಐಎನ್ ಗಳು, ನೆಟ್ ಬ್ಯಾಂಕಿಂಗ್, ಐಪಿನ್ ಗಳು, ಡೆಬಿಟ್/ಎಟಿಎಂ ಕಾರ್ಡ್ ಗಳು ಮತ್ತು ಪಿನ್ ಗಳನ್ನು ನಿರಾಕರಿಸಲು ಬ್ಯಾಂಕಿಗೆ ಅಧಿಕಾರವಿರುತ್ತದೆ.

13.

ಖಾತೆ ತೆರೆಯುವ ಸಮಯದಲ್ಲಿ ಅಥವಾ ವ್ಯವಹಾರದ ಸಾಮಾನ್ಯ ಅವಧಿಯಲ್ಲಿ ಯಾವುದೇ ವಹಿವಾಟು ನಡೆಸುವುದನ್ನು  ಬ್ಯಾಂಕ್ ನ ಯಾವುದೇ ಸೇಲ್ಸ್ ಪ್ರತಿನಿಧಿಗೆ ನಾನು ಯಾವುದೇ ಹಣದ ಮೊತ್ತ ಪಾವತಿಸುವುದಿಲ್ಲ ಎಂದು ಒಪ್ಪುತ್ತೇನೆ. ನಾನು ಕೇವಲ ಬ್ಯಾಂಕಿನ ಟೆಲ್ಲರ್ ಕೌಂಟರ್ ಗಳಲ್ಲಿ ಮತ್ತು ಶಾಖೆಯ ಆವರಣದಲ್ಲಿ ಹಣ ಠೇವಣಿ ಮಾಡುತ್ತೇನೆ ಎಂದು ಒಪುತ್ತೇನೆ.

14.

ಬ್ಯಾಂಕ್ ಗೆ ನನ್ನ ಫ್ಯಾಕ್ಸ್ ಸೂಚನೆಗಳನ್ನು ಕಾರ್ಯಗತಗೊಳಿಸಲು ಬ್ಯಾಂಕಿಗೆ ಆವಶ್ಯಕವಿರುವ ಅಗತ್ಯ ಬರಹಗಳನ್ನು ರೂಪದಲ್ಲಿ ಮತ್ತು ರೀತಿಯಲ್ಲಿ ಕಾರ್ಯಗತಗೊಳಿಸುವೆನು ಎಂದು ಒಪ್ಪುತ್ತೇನೆ.

15.

ಬ್ಯಾಂಕ್ ಅದರ ವಿವೇಚನೆಯೊಂದಿಗೆ ನನಗೆ ಸಂಪರ್ಕಗಳು/ಪತ್ರಗಳು ಇತ್ಯಾದಿ ಕೊರಿಯರ್/ಮೆಸೆಂಜರ್ /ಮೇಲ್ ಅಥವಾ ಅನ್ಯ ಯಾವುದೇ ಮಾಧ್ಯಮದಿಂದ ಕಳುಹಿಸುವುದು ಮತ್ತು ಅಲ್ಲಿಂದ ಯಾವುದೇ ವಿಳಂಬ ಉದ್ಭವಿಸಿದ್ದಲ್ಲಿ  ಬ್ಯಾಂಕ್  ಬಾಧ್ಯವಾಗುವುದಿಲ್ಲ ಎಂದು ಒಪ್ಪುತ್ತೇನೆ.

16.

ನನ್ನ ನಿರ್ದಿಷ್ಟ ಸೂಚನೆಗಳ ಅನುಪಸ್ಥಿತಿಯಲ್ಲಿ ವೈಯಕ್ತಿಕವಾಗಿ ಶಾಖೆಯಿಂದ ಸಂಗ್ರಹಿಸಲು, ಚೆಕ್ ಬುಕ್ ಗಳು, ಫೋನ್ ಬ್ಯಾಂಕಿಂಗ್, ಟಿಐಎನ್ ಗಳು, ನೆಟ್ ಬ್ಯಾಂಕಿಂಗ್, ಐಪಿನ್ ಗಳು, ಡೆಬಿಟ್/ಎಟಿಎಂ ಕಾರ್ಡ್ ಗಳು ಮತ್ತು ಪಿನ್ ಗಳು ಕೊರಿಯರ್ /ಮೆಸೆಂಜರ್ /ಮೇಲ್ ಅಥವಾ ಅನ್ಯ ಯಾವುದೇ ಮಾಧ್ಯಮದಿಂದ ಬ್ಯಾಂಕ್ ಅದರ ವಿವೇಚನೆಯೊಂದಿಗೆ ನಾನು ಹೇಳಿದ ವಿಳಾಸಕ್ಕೆ ಕಳುಹಿಸುವುದು ಎಂದು ಒಪ್ಪುತ್ತೇನೆ ಹಾಗೂ ಅಂಗಿಕರೀಸುತ್ತೇನೆ.

17.

ನನ್ನ ಖಾತೆ ತೆರೆಯುವ ಸಮಯದಲ್ಲಿ ನಾನು ಲಿಖಿತವಾಗಿ ಮನವಿ ಮಾಡಿದ ಹೊರತು ಬ್ಯಾಂಕ್ ನನಗೆ ಚೆಕ್ ಬುಕ್ ನೀಡುವುದಿಲ್ಲ. ಹಾಗೂ ಇನ್ನು ಮುಂದೆ ಚೆಕ್ ಬುಕ್ ಗಳು ನನ್ನ ಲಿಖಿತ ವಿನಂತಿಯಲ್ಲಿ ಎಟಿಎಂ, ಫೋನ್ ಬ್ಯಾಂಕಿಂಗ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕವೇ ಬ್ಯಾಂಕ್ ನೀಡುವುದು ಎಂದು ಒಪ್ಪುತ್ತೇನೆ.

18.

ಅಪ್ರಾಪ್ತ ವಯಸ್ಕ  ಪರವಾಗಿ ಅವರ ಯೋಗ್ಯ ರಕ್ಷಕರಿಂದ ಅಥವಾ ನ್ಯಾಯವ್ಯಾಪ್ತಿಯ ನ್ಯಾಯಾಲಯದಿಂದ ನೇಮಿಸಲ್ಪಟ್ಟ ರಕ್ಷಕರಿಂದ ಖಾತೆಯನ್ನು ತೆರೆಯಬಹುದು ಎಂದು ನಾನು ಒಪ್ಪುತೇನೆ. ಅಪ್ರಾಪ್ತ ವಯಸ್ಕ  ಪ್ರಾಪ್ತ ವಯಸ್ಸಿಗೆ ಬರುವ ವರೆಗೆ ರಕ್ಷಕರು ಅಪ್ರಾಪ್ತ ವಯಸ್ಕರ ಎಲ್ಲಾ ವಹಿವಾಟುಗಳನ್ನು ಮೇಲಿನ ಖಾತೆಯಲ್ಲಿರುವ ಯಾವುದೇ ವಿವರಣೆಗೆ ಪ್ರತಿನಿಧಿಸಬಹುದು. ಅಪ್ರಾಪ್ತ ವಯಸ್ಕ  ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ರಕ್ಷಕರರಿಗೆ ಖಾತೆಯನ್ನು ನಿರ್ವಹಿಸುವ ಹಕ್ಕು ನಿಲ್ಲುತ್ತದೆ. ಅಪ್ರಾಪ್ತ ವಯಸ್ಕ ಖಾತೆಯಲ್ಲಿ ಮಾಡಿದ ಯಾವುದೇ ಹಿಂಪಡೆಯುವಿಕೆ(withdrawl)/ವಹಿವಾಟುಗಳು ವಿರುದ್ಧ, ರಕ್ಷಕರು ಮೇಲಿನ ಅಪ್ರಾಪ್ತ ವಯಸ್ಕ  ಹಕ್ಕನ್ನು ಕೇಳಲು ಬ್ಯಾಂಕಿಗೆ ನಷ್ಟ ಪರಿಹಾರ ನೀಡಲು ಒಪ್ಪುತ್ತೇನೆ. 

19.

ನನ್ನ ಖಾತೆಯಲ್ಲಿ ಪ್ರಭಾವಿತ ವಹಿವಾಟುಗಳನ್ನು ನಡೆಸಲು ಸಾಕಷ್ಟು ಹಣ/ ಬ್ಯಾಲನ್ಸ್ /ಪೂರ್ವ –ವ್ಯವಸ್ಥೆ ಮಾಡಿದ ಸಾಲ  ಸೌಲಭ್ಯಗಳು ಇರುವವು ಎಂದು ಖಚಿತಪಡಿಸುತ್ತೇನೆ ಮತ್ತು ಕೈಗೊಳ್ಳುತ್ತೇನೆ. ಯಾವುದೇ ಉದ್ಭವಿಸುವ ಪರಿಣಾಮಗಳಿಗೆ ನಿಧಿಯ ಅಸಮರ್ಪಕತೆಯಿಂದಾಗಿ ನನ್ನ ಸೂಚನೆಗಳನ್ನು ಬ್ಯಾಂಕ್ ಪಾಲಿಸದೆ ಇರುವುದು ಮತ್ತು ಬ್ಯಾಂಕ್ ತನ್ನ ಸ್ವವಿವೇಚನೆಯಿಂದ ಹಣದ ಅಸಮರ್ಪಕತೆಯನ್ನು ತೆಗೆದುಕೊಳ್ಳದಿರುವ ಸೂಚನೆಗಳು ನನ್ನಿಂದ ಪೂರ್ವ ಅನುಮೋದನೆ ಅಥವಾ ಸೂಚನೆ ಇಲ್ಲದೆ ಕೈಗೊಳ್ಳಲು  ನಿರ್ಧರಿಸಬಹುದು ಮತ್ತು ಮುಂಗಡ ಬಡ್ಡಿ ಸಮೇತ ಮರುಪಾವತಿ ಮಾಡಲು, ಓವರ್ ಡ್ರಾಫ್ಟ್ ಅಥವಾ ಕ್ರೆಡಿಟ್  ಆ ಮೂಲಕ ಕಾಲ ಕಾಲಕ್ಕೆ ಅನ್ವಯವಾಗುವ ಅವಿಭಾಜ್ಯ ಸಾಲ ದರದಲ್ಲಿ ಸಂಭವಿಸುವ ಎಲ್ಲಾ ಸಂಬಂಧಿತ ಶುಲ್ಕಗಳಿಗೆ ನಾನು ಜವಾಬ್ದಾರನಾಗಿರುತ್ತೇನೆ. ಸಾಕಷ್ಟು ಹಣವಿಲ್ಲದ ಕಾರಣದಿಂದಾಗಿ ಚೆಕ್ ಗಳ ಡಿಸ್ಹಾನರ್ ಅಥವಾ ಹೆಚ್ಚಿನ ಮೌಲ್ಯದ ಚೆಕ್ ರಿಟರ್ನ್ ಆಗುವುದರಿಂದ, ಚೆಕ್ ಪುಸ್ತಕಗಳ ಸ್ಥಗಿತ/ಬ್ಯಾಂಕ್  ಖಾತೆಯನ್ನು ಮುಚ್ಚಲು ಕಾರಣವಾಗಬಹುದು ಎಂದು ನಾನು ಒಪ್ಪುತ್ತೇನೆ ಹಾಗೂ ಕೈಗೊಳ್ಳುತ್ತೇನೆ.

20.

ಖಾತೆಯನ್ನು ಓವರ್ ಡ್ರಾನ್ ಮಾಡಿದ ಸಂದರ್ಭದಲ್ಲಿ, ನನ್ನ ಯಾವುದೇ ಖಾತೆಗಳಲ್ಲಿ ಅಡಗಿದ ಯಾವುದೇ ಕ್ರೆಡಿಟ್‌ಗೆ ವಿರುದ್ಧವಾಗಿ ಮೊತ್ತನ್ನು ಹೊಂದಿಸಲು ಬ್ಯಾಂಕಿಗೆ ಅಧಿಕಾರವಿರುತ್ತದೆ ಎಂದು ನಾನು ಒಪ್ಪುತ್ತೇನೆ.

21.

BC ಕೌಂಟರ್ಗಳಲ್ಲಿ ನನ್ನಿಂದ ನಡೆಸಲ್ಪಟ್ಟ ವಹಿವಾಟುಗಳು ಬ್ಯಾಂಕಿನ ಪುಸ್ತಕಗಳಲ್ಲಿ ಮುಂದಿನ ಕೆಲಸದ ದಿನದಂದು  ಪ್ರಕಟಗೊಳ್ಳುವುದು ಎಂದು ನಾನು ಒಪ್ಪುತ್ತೇನೆ.

22.

ಅಡಚಣೆಯಿಂದಾಗಿ ಅಥವಾ ತಾಂತ್ರಿಕ ದೋಷದಿಂದ ಅಲಭ್ಯವಿರುವ ಯಾವುದೇ ಸೇವೆಗಳು/ಸೌಲಭ್ಯಗಳು, ಅಥವಾ ಯಾವುದೇ ದೂರಸಂಪರ್ಕದಿಂದ ವಿಫಲತೆ, ಅಥವಾ ಯಾವುದೇ ಸಾಫ್ಟ್ ವೇರ್ ಅಥವಾ ಹಾರ್ಡ್ ವೇರ್ ಸಿಸ್ಟಮ್ ಗಳಿಂದ ದೋಷ, ಬ್ಯಾಂಕ್ ನ ನಿಯಂತ್ರಣದಿಂದ ಮೀರಿದ ಯಾವುದೇ ಹಾನಿ, ನಷ್ಟಗಳಿಗೆ (ನೇರ ಅಥವಾ ಪರೋಕ್ಷವಾಗಿ) ಬ್ಯಾಂಕ್ ಬಾಧ್ಯವಾಗುವುದಿಲ್ಲ ಎಂದು ನಾನು ಒಪ್ಪುತ್ತೇನೆ.

23.

ಬ್ಯಾಂಕ್, ಅನ್ಯ ಸಂಸ್ಥೆಗಳಿಗೆ ಕಟ್ಟು ನಿಟ್ಟಾದ ವಿಶ್ವಾಸದಿಂದ, ಅಂತಹ ವೈಯಕ್ತಿಕ ಮಾಹಿತಿಯನ್ನು ಸಮಂಜಸವಾಗಿ ಅಗತ್ಯವಾಗಬಹುದಾದ ಅಂತರ್ಗತ ಕಾರಣಗಳಿಗಾಗಿ ತಿಳಿಯಪಡಿಸಬಹುದು ಎಂದು ನಾನು ಒಪ್ಪುತ್ತೇನೆ:

  1. ಯಾವುದೇ ದೂರಸಂಪರ್ಕ ಅಥವಾ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ನೆಟ್ವರ್ಕ್ ನಲ್ಲಿ ಭಾಗವಹಿಸುವುದು 
  2. ಕಾನೂನು ನಿರ್ದೇಶನದ ಅನುಸಾರವಾಗಿ 
  3. ಕ್ರೆಡಿಟ್ ರೇಟಿಂಗ್ ಗೆ ಮಾನ್ಯತೆ ಪಡೆದ ಕ್ರೆಡಿಟ್ ರೇಟಿಂಗ್ ಏಜನ್ಸಿಗಳು
  4. ವಂಚನೆ ತಡೆಗಟ್ಟುವ ಉದ್ದೇಶಗಳಿಗಾಗಿ 
  5. ಕ್ರೆಡಿಟ್ ಮಾಹಿತಿ ಬ್ಯುರೊಗಳಿಗೆ 

24.

ಎಚ್ ಬಿ ಎಲ್ ಗ್ಲೋಬಲ್ ಲಿಮಿಟೆಡ್ ಮತ್ತು ಅನ್ಯ ಇತರ ಮಾರ್ಕೆಟಿಂಗ್ ಏಜೆಂಟ್ /ರು ಮತ್ತು/ಅಥವಾ ಬ್ಯಾಂಕ್ ಪ್ರವೇಶಿಸುವ ಗುತ್ತಿಗೆದಾರರಿಂದ ಅಥವಾ ಯಾವುದೇ ವ್ಯವಸ್ಥೆಗೆ ಪ್ರವೇಶಿಸುವಾಗ, ಸೇವೆಗಳು/ಉತ್ಪನ್ನಗಳನ್ನು ನೀಡುವ ಸಂಬಂಧಿಸಿದಂತೆ, ಪರಿಮಿತವಿಲ್ಲದೆ ಸೇರಿದಂತೆ, ವಿವಿಧ ಹಣಕಾಸು ಉತ್ಪನ್ನಗಳ ಕ್ರಾಸ್ ಸೆಲಿಂಗ್ ನ ಉದ್ದೇಶಕ್ಕಾಗಿ ನಾನು ಬ್ಯಾಂಕ್ ಗೆ ಖಾತೆ ತೆರೆಯುವ ಫಾರ್ಮ್ ನಲ್ಲಿ ನೀಡುವ ಮಾಹಿತಿಯನ್ನು ತಿಳಿಯಪಡಿಸಲು ಒಪ್ಪಿಗೆ ನೀಡುತ್ತೇನೆ.  ಯಾವುದೇ ಕ್ರಾಸ್ –ಸೆಲ್ ಪ್ರಯತ್ನ ಮಾಡುವಾಗ ನಾನು ‘ಕರೆ ಮಾಡಬೇಡಿ’ ಸೌಲಭ್ಯವನ್ನು ನೊಂದಾಯಿಸಿದ್ದೇನೆಯೆ ಇಲ್ಲವೆ ಎಂದು ಬ್ಯಾಂಕ್ ನಿರಂತರವಾಗಿ ಪರಿಶೀಲಿಸಬೇಕು.

25.

ಸಿಬಿಲ್ (CIBIL)ಗೆ ಮಾಹಿತಿಯ ಪ್ರಕಟಣೆ:

ಪೂರ್ವ –ಷರತ್ತಿನಂತೆ, ನನಗೆ ಲೋನ್/ಅಡ್ವಾನ್ಸ್ /ಅನ್ಯ ನಿಧಿ ಆಧಾರಿತ ಮತ್ತು ನಿಧಿಯೇತರ ಆಧಾರಿತ ಕ್ರೆಡಿಟ್ ಸೌಲಭ್ಯಗಳ ಅನುದಾನಕ್ಕೆ ಸಂಬಂಧಿಸಿದ, ನನ್ನಿಂದ ಪಡೆಯಲ್ಪಟ್ಟ / ಪಡೆಯಬೇಕಾದ ಕ್ರೆಡಿಟ್ ಸೌಲಭ್ಯ, ನನ್ನಿಂದ ಸ್ವೀಕರಿಸಿದ / ಸ್ವೀಕರಿಸಬೇಕಾದ ಬಾಧ್ಯತೆಗಳನ್ನು ಅದಕ್ಕೆ ಸಂಬಂಧಿಸಿದಂತೆ ಮತ್ತು  ನಾನು ಡೀಫಾಲ್ಟ್ ಆಗಿದ್ದಲ್ಲಿ ನನಗೆ ಸಂಬಂಧಿಸಿದ ಯಾವುದೇ ಮಾಹಿತಿ ಮತ್ತು ಡೇಟಾದ ಪ್ರಕಟಣೆಯನ್ನು ಬಹಿರಂಗಪಡಿಸುವಿಕೆಗೆ  ಬ್ಯಾಂಕ್ ಗೆ ನನ್ನ ಸಮ್ಮತಿಯ ಅಗತ್ಯವಿರುತ್ತದೆ ಎಂದು ನಾನು ತಿಳಿದಿರುತ್ತೇನೆ,  

ಅಂತೆಯೇ, ನಾನು ಎಲ್ಲಾ ಅಥವಾ ಯಾವುದೇ ಅಂತಹ ಮಾಹಿತಿ ಈ ಮೂಲಕ ಬ್ಯಾಂಕ್ ನಿಂದ ಬಹಿರಂಗಪಡಿಸುವಿಕೆಯನ್ನು

 ಒಪ್ಪುತ್ತೇನೆ ಮತ್ತು ಸಮ್ಮತಿಸುತ್ತೇನೆ :-

1 ನನಗೆ ಸಂಬಂಧಿಸಿದ ಮಾಹಿತಿ ಹಾಗೂ ಡೇಟಾ 

2 ನನ್ನಿಂದ ಪಡೆದ /ಪಡೆಯಬೇಕಾದ ಕ್ರೆಡಿಟ್ ಸೌಲಭ್ಯದ  ಯಾವುದೇ ಮಾಹಿತಿ ಅಥವಾ ಡೇಟಾ  ಮತ್ತು 

3 ನನ್ನಿಂದ ಯಾವುದೇ ಬಾಧ್ಯತೆ ಡೀಫಾಲ್ಟ್ ಆಗಿ, ಅಂತಹ ಬಾಧ್ಯತೆಯನ್ನು ಪಾಲಿಸಲು ಬ್ಯಾಂಕ್  ಸೂಕ್ತ ಮತ್ತು ಅಗತ್ಯವೆಂದು ಭಾವಿಸಿದ್ದಲ್ಲಿ ಕ್ರೆಡಿಟ್ ಮಾಹಿತಿ ಬ್ಯುರೋ (ಭಾರತ) ಲಿಮಿಟೆಡ್  ಗೆ ಮತ್ತು ಆರ್ ಬಿ ಐ ಪರವಾಗಿ ಅಧಿಕಾರ ಹೊಂದುವ ಯಾವುದೇ  ಅನ್ಯ ಏಜನ್ಸಿ ಗೆ ತಿಳಿಸಬಹುದು ಮತ್ತು  ಒದಗಿಸಬಹುದು. ನಾನು ಬ್ಯಾಂಕಿಗೆ ನೀಡಿರುವ ಮಾಹಿತಿ ಮತ್ತು ಡೇಟಾ ಸತ್ಯ ಹಾಗೂ ಸರಿಯಾಗಿದೆ ಎಂದು ಘೋಷಿತ್ತೇನೆ.


     ನಾನು ಅದನ್ನು ಕೈಗೊಳ್ಳುತ್ತೇನೆ :

1 ಕ್ರೆಡಿಟ್ ಮಾಹಿತಿ ಬ್ಯುರೋ (ಭಾರತ) ಲಿಮಿಟೆಡ್  ಮತ್ತು ಅಧಿಕಾರ ಹೊಂದಿದ ಯಾವುದೇ ಅನ್ಯ ಏಜನ್ಸಿಯು ಬ್ಯಾಂಕ್ ನಿಂದ ಸೂಕ್ತ ವೆಂದು ಭಾವಿಸದ ರೀತಿಯಲ್ಲಿ ಹೇಳಿದ ಮಾಹಿತಿ ಹಾಗೂ ಡೇಟಾವನ್ನು ಉಪಯೋಗಿಸಬಹುದು ಮತ್ತು  ಪರಿಶೀಲಿಸಬಹುದು; 

2. ಕ್ರೆಡಿಟ್ ಮಾಹಿತಿ ಬ್ಯುರೋ (ಭಾರತ) ಲಿಮಿಟೆಡ್  ಮತ್ತು ಅಧಿಕಾರ ಹೊಂದಿದ ಯಾವುದೇ ಅನ್ಯ ಏಜನ್ಸಿಯು, ಅವರಿಂದ ತಯಾರಿಸಿದ/ ಪರಿಶೀಲಿಸಿದ ಮಾಹಿತಿ ಮತ್ತು ಡೇಟಾ ಅಥವಾ ಉತ್ಪನ್ನಗಳನ್ನು ಬ್ಯಾಂಕ್ ಗಳಿಗೆ /ಹಣಕಾಸು ಸಂಸ್ಥೆಗಳು ಮತ್ತು ಅನ್ಯ ಕ್ರೆಡಿಟ್ ನೀಡುವವರಿಗೆ ಅಥವಾ ನೊಂದಾಯಿತ ಬಳಕೆದಾರರಿಗೆ,  ಇದರ ಪರವಾಗಿ ರಿಸರ್ವ್ ಬ್ಯಾಂಕ್ ನಿರ್ದಿಷ್ಟಪಡಿಸಿದಂತೆ ಪರಿಗಣಿಸಲು ಒದಗಿಸಬಹುದು.

26.

(ಫೋರ್ಸ್ ಮೆಜ್ಯುರ್ ) ಅನಿವಾರ್ಯ ನಿರ್ಬಂಧ :

ಯಾವುದೇ ವಹಿವಾಟು ಫಲಪ್ರದವಾಗದಿದ್ದಲ್ಲಿ ಅಥವಾ ಪೂರ್ಣಗೊಳ್ಳದಿದ್ದಲ್ಲಿ, ಅಥವಾ ಬ್ಯಾಂಕ್ ನ ಯಾವುದೇ ಅಂಶ ಅದರ ಕರ್ತವ್ಯಗಳನ್ನು ನಿಯಮ ಮತ್ತು ಷರತ್ತುಗಳ ಅಡಿಯಲ್ಲಿ ಕಾರ್ಯಗತಗೊಳಿಸಲು ವಿಫಲಗೊಂಡಲ್ಲಿ ಅಥವಾ ಅನಿವಾರ್ಯ ನಿರ್ಬಂಧ ಘಟನೆಯಿಂದ (ಕೆಳೆಗೆ ವ್ಯಾಖ್ಯಾನಿಸಲಾಗಿದೆ) ಅದರ ಸೇವೆಗಳು/ಸೌಲಭ್ಯಗಳಿಗೆ ನಿರ್ದಿಷ್ಟವಾಗಿ ಅನ್ವಯವಾಗುವ ಕಾರ್ಯಕ್ಷಮತೆಯನ್ನು ತಡೆಗಟ್ತಿದ್ದಲ್ಲಿ, ಬಾಧಿಸಿದ್ದಲ್ಲಿ ಅಥವಾ ವಿಳಂಬವಾದಲ್ಲಿ ಬ್ಯಾಂಕ್ ಬಾಧ್ಯವಾಗುವುದಿಲ್ಲ ಹಾಗೂ ಅನಿವಾರ್ಯ ನಿರ್ಬಂಧ ಘಟನೆಯು ಮುಂದುವರೆಯುವವರೆಗೆ ಅಂತಹ ಅದರ ಜವಾಬ್ದಾರಿಗಳನ್ನು ಅಮಾನತುಗೊಳಿಸಲಾಗುವದು.


ಅನಿವಾರ್ಯ ನಿರ್ಬಂಧ ಘಟನೆ ಎಂದರೆ ಯಾವುದೇ ಘಟನೆ ಬ್ಯಾಂಕಿನ ಸಮಂಜಸವಾದ ನಿಯಂತ್ರಣವನ್ನು ಮೀರಿದ ಯಾವುದೇ ಕಾರಣಗಳಿಗಾಗಿ, ಪರಿಮಿತಗಳಿಲ್ಲದೆ, ಯಾವುದೇ ಸಂಪರ್ಕ ವ್ಯವಸ್ಥೆಯ ಅಲಭ್ಯತೆ, ಉಲ್ಲಂಘನೆ ಅಥವಾ ಪಾವತಿಸುವ  ಪ್ರಕ್ರಿಯೆಗಳಲ್ಲಿ ಅಥವಾ ವಿತರಣಾ ಕಾರ್ಯವಿಧಾನದಲ್ಲಿ ವೈರಸ್ , ವಿಧ್ವಂಸಕ, ಬೆಂಕಿ,ಪ್ರವಾಹ,ಸ್ಫೋಟ, ಅನಿರೀಕ್ಷಿತ ಘಟನೆ, ನಾಗರಿಕ ಸಂಘರ್ಷ ಅಥವಾ ಯಾವುದೇ ರೀತಿಯ ಕೈಗಾರಿಕಾ ಮುಷ್ಕರ, ಗಲಭೆಗಳು, ದಂಗೆ, ಯುದ್ಧ, ಸರ್ಕಾರದ ಕೃತ್ಯಗಳು,ಕಂಪ್ಯೂಟರ್ ಹ್ಯಾಕಿಂಗ್, ಕಂಪ್ಯೂಟರ್ ಡೇಟಾ ಮತ್ತು ಸ್ಟೋರೇಜ್ ಡಿವೈಸ್ ಗಳಲ್ಲಿ ಅನಧಿಕೃತ  ಪ್ರವೇಶ, ಕಂಪ್ಯೂಟರ್ ಕ್ರ್ಯಾಶ್ ವಾದಲ್ಲಿ, ಕಂಪ್ಯೂಟರ್ ಟರ್ಮಿನಲ್ ನಲ್ಲಿನ ಅಸಮರ್ಪಕ ಕಾರ್ಯಗಳು ಅಥವಾ ಸಿಸ್ಟಮ್ ಗಳಲ್ಲಿ ಯಾವುದೇ ದುರುದ್ದೇಶದಿಂದ ಪ್ರಭಾವಿತವಾದ, ವಿನಾಶಕಾರಿ ಅಥವಾ ಕರಪಟಿಂಗ್ ಕೋಡ್ ಅಥವಾ ಪ್ರೋಗ್ರಾಮ್, ಯಾಂತ್ರಿಕ ಅಥವಾ ತಾಂತ್ರಿಕ ದೋಷಗಳು/ವೈಫಲ್ಯಗಳು ಅಥವಾ ವಿದ್ಯುತ್ ಸ್ಥಗಿತ, ದೂರಸಂಪರ್ಕದಲ್ಲಿ ದೋಷಗಳು/ವೈಫಲ್ಯಗಳು ಇತ್ಯಾದಿ.

27.

ಸುಭದ್ರತೆ :

ನಾನು ಬ್ಯಾಂಕ್ ಗೆ ಯಾವುದೇ ತೊಂದರೆಗಳ ವಿರುದ್ಧ ಎಲ್ಲಾ ಕ್ರಿಯೆಗಳು, ಹಕ್ಕುಗಳು, ಬೇಡಿಕೆಗಳು, ನಡಾವಳಿಗಳು, ನಷ್ಟಗಳು, ಹಾನಿ, ಶುಲ್ಕಗಳು ಮತ್ತು ವೆಚ್ಚಗಳು ಯಾವುದೇ ಸಮಯದಲ್ಲಿ ಬ್ಯಾಂಕ್ ವಹಿಸಿಕೊಳ್ಳುವುದು, ತಾಳಿಕೊಳ್ಳುವುದು, ಅನುಭವಿಸುವುದು, ಅಥವಾ ಇತರ ಪರಿಣಾಮವಾಗಿ ಅಥವಾ ಕಾರಣದಿಂದ ಅಥವಾ ಒದಗಿಸಿದ ಯಾವುದೇ ಸೇವೆಗಳಲ್ಲಿ ಉದ್ಭವಿಸುವ ಅಥವಾ ನನ್ನ ಕಡೆಯಿಂದ ಯಾವುದೇ ನಿರ್ಲಕ್ಷ್ಯ/ತಪ್ಪು/ದುಷ್ಕೃತ್ಯ ಅಥವಾ ಉಲ್ಲಂಘನೆ ಅಥವಾ ಯಾವುದೇ ಸೇವೆಗಳಿಗೆ ನನ್ನಿಂದ ಯಾವುದೇ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸದಿರುವುದು  ಅಥವಾ ಬ್ಯಾಂಕ್ ನ ಉತ್ತಮ ನಂಬಿಕೆಯ ಕಾರಣದಿಂದ ನಾನು ನೀಡಿದ ಯಾವುದೇ ಸೂಚನೆಯ ಮೇರೆಗೆ ಕ್ರಮ ತೆಗೆದುಕೊಳ್ಳಲು ಅಥವಾ ನಿರಾಕರಿಸಲು ಹಾಗು ಬ್ಯಾಂಕ್ ಗೆ ನಷ್ಟ ಪರಿಹಾರ ಪಡೆಯುವ ಹಕ್ಕಿದೆ ಎಂದು ಒಪ್ಪುತ್ತೇನೆ..

28.

ಹಕ್ಕುದಾರರ ಹಕ್ಕು/ ಸಂದಾಯ:

ನಾನು ಹಾಗೂ ಬ್ಯಾಂಕ್ ನೊಂದಿಗೆ ಸಂದಾಯವಾಗಿ ಬ್ಯಾಂಕ್ ಯಾವುದೇ ಸಮಯದಲ್ಲಿ ನನ್ನೊಂದಿಗೆ ಇತರ ಯಾವುದೇ ಒಪ್ಪಂದಗಳ ಅಡಿಯಲ್ಲಿ ತನ್ನ ನಿರ್ದಿಷ್ಟ ಹಕ್ಕುಗಳಿಗೆ ಯಾವುದೇ ಪಕ್ಷಪಾತವಿಲ್ಲದೆ, ಅದರ ಸ್ವವಿವೇಚನೆಯಿಂದ ಮತ್ತು ನನಗೆ ಸೂಚನೆ ಇಲ್ಲದೆ ನನಗೆ ಸೇರಿದ ಮತ್ತು ಹತ್ತಿರ/ಬ್ಯಾಂಕ್ ನಲ್ಲಿ ಇರಿಸಿದ  ಠೇವಣಿ ಅಥವಾ ಬ್ಯಾಂಕ್ ನಿಂದ ನನಗೆ ಪಾವತಿಸಬೇಕಾದ ಯಾವುದೇ ಹಣವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯಾವುದೇ ಶುಲ್ಕಗಳು/ಬಾಕಿಗಳನ್ನು ಅಥವಾ ಸಂಬಂಧಿಸಿದಂತೆ ಸಾಲ ಸೌಲಭ್ಯ, ಬ್ಯಾಂಕಿನ ಯಾವುದೇ ಬಾಕಿ ಮತ್ತು ಬಾಕಿ ಮೊತ್ತ, ಪಾವತಿಸಬೇಕಾದುದನ್ನು ಒಳಗೊಂಡಂತೆ ಹಕ್ಕುದಾರರ ಹಕ್ಕಿನ ಅಸ್ತಿತ್ವವನ್ನು ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ  ನಾನು ಈ ಮೂಲಕ ನೀಡುತ್ತೇನೆ ಮತ್ತು ಖಚಿತಪಡಿಸುತ್ತೇನೆ.

29.

ಇತರೆ:

ಈ ನಿಯಮಗಳು ಮತ್ತು ಷರತ್ತುಗಳಿಂದ ಯಾವುದೇ ನೀಡಲಾದ ಹಕ್ಕುಗಳನ್ನು ಜಾರಿಗೊಳಿಸಲು ವಿಫಲಗೊಂಡಲ್ಲಿ ಅಥವಾ ಯಾವುದೇ ಕಾನೂನು ಅಂತಹ ಯಾವುದೇ ಹಕ್ಕುಗಳ ಮನ್ನಾ ಮಾಡಲು ಎಂದಿಗೂ ಪರಿಗನಣಿಸುವದಿಲ್ಲ ಅಥವಾ ಯಾವುದೇ ನಂತರದ ಸಮಯದಲ್ಲಿ ಅದರ ಬಳಕೆ ಅಥವಾ ಜಾರಿಗೊಳಿಸುವಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದಿಲ್ಲ.

30.

ಆಡಳಿತ ಕಾನೂನು :

ಎಲ್ಲಾ ಹಕ್ಕುಗಳು, ವಿಷಯಗಳು ಮತ್ತು ವಿವಾದಗಳು ಕೇವಲ ಮುಂಬಯಿಯಲ್ಲಿರುವ ಸಮರ್ಥ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತವೆ. ಈ ನಿಯಮಗಳು ಮತ್ತು ಷರತ್ತುಗಳು ಮತ್ತು /ಅಥವಾ ಬ್ಯಾಂಕ್ ನಿರ್ವಹಿಸುವ ಗ್ರಾಹಕರ ಖಾತೆಗಳಲ್ಲಿನ ಕಾರ್ಯಾಚರಣೆಗಳು ಮತ್ತು /ಅಥವಾ ಬ್ಯಾಂಕ್ ನೀಡುವ ಸೇವೆಗಳ ಬಳಕೆಯನ್ನು ಭಾರತದ ಗಣರಾಜ್ಯದ ಕಾನೂನುಗಳು ನಿಯಂತ್ರಿಸುತ್ತದೆ ಮತ್ತು ಬೇರೆ ಯಾವುದೇ ರಾಷ್ಟ್ರಗಳು ನಿಯಂತ್ರಿಸುವುದಿಲ್ಲ. ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ಹಕ್ಕುಗಳು ಅಥವಾ ವಿಷಯಗಳಿಗೆ ಸಂಬಂಧಿಸಿದಂತೆ ಭಾರತದ ಮುಂಬಯಿನಲ್ಲಿರುವ  ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಗೆ ಸಲ್ಲಿಸಲು ಗ್ರಾಹಕ ಮತ್ತು ಬ್ಯಾಂಕ್ ಒಪ್ಪುತ್ತಾರೆ. ಭಾರತದ ಗಣರಾಜ್ಯವನ್ನು  ಹೊರತುಪಡಿಸಿ ಬೇರೆ ಯಾವುದೇ ದೇಶದ ಕಾನೂನುಗಳನ್ನು ಪಾಲಿಸಿದ ಕಾರಣ ಬ್ಯಾಂಕ್ ನೇರ ಅಥವಾ ಪರೋಕ್ಷವಾಗಿ ಬಾಧ್ಯತೆಯನ್ನು ಸ್ವೀಕರಿಸುವುದಿಲ್ಲ. 


31.

ಬ್ಯಾಂಕ್ ನಿಂದ ನಾನು ಪಡೆದ/ ಹೊಂದಿರುವ ಯಾವುದೇ ಉತ್ಪನ್ನಗಳು/ಸೇವೆಗಳ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ನನಗೆ ಏನಾದರೂ ದೂರುಗಳಿದ್ದಲ್ಲಿ ಬ್ಯಾಂಕ್ ನೊಳಗಿನ ಗ್ರೀವಿಯನ್ಸ್ ರಿಡ್ರಸ್ಸಲ್ ಸೆಲ್ ಅನ್ನು ಪರಿಹಾರಕ್ಕಾಗಿ ಸಂಪರ್ಕಿಸಬಹುದು ಎಂಬುದು ನನಗೆ ತಿಳಿದಿದೆ ಹಾಗೂ ನಾನು ದೂರು ನೀಡಿದ 30 ದಿನಗಳೊಳಗೆ ತೃಪ್ತಿಕರವಾದ ಪ್ರತಿಕ್ರಿಯೆ ದೊರೆಯದಿದ್ದರೆ, ಬ್ಯಾಂಕಿಂಗ್ ಆಂಬುಡ್ಸ್ ಮ್ಯಾನ್ ಸ್ಕೀಮ್, 2006 ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೇಮಕ ಮಾಡಿರುವ, ನಾನು ಖಾತೆಯನ್ನು ಹೊಂದಿರುವ ಪ್ರದೇಶಕ್ಕೆ ಜವಾಬ್ದಾರರಾದ ಆಂಬುಡ್ಸ್ ಮ್ಯಾನ್ ಅನ್ನು ಸಂಪರ್ಕಿಸಬಹುದು, ಇದರ ವಿರಗಳು ಇಲ್ಲಿ www.bankingombudsman.rbi.org.in ಲಭ್ಯ. 

32.

ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗಾಗಿ ಎರಡು ವರ್ಷಗಳ ನಿರಂತರ ಅವಧಿಗೆ ನನ್ನ/ನಮ್ಮಿಂದ ಯಾವುದೇ ವಹಿವಾಟುಗಳು ಪ್ರಾರಂಭವಾಗದಿದ್ದರೆ (ಕ್ರೆಡಿಟ್ ಬಡ್ಡಿ, ಡೆಬಿಟ್ ಬಡ್ಡಿ ಮುಂತಾದ ಸಿಸ್ಟಮ್ ರಚಿತ ವಹಿವಾಟುಗಳನ್ನು ಹೊರತುಪಡಿಸಿ), ನನ್ನ/ನಮ್ಮ ಖಾತೆಯು ‘ಸುಪ್ತ (ಡಾರ್ಮೆಂಟ್)’ ಖಾತೆಯೆಂದು ಬ್ಯಾಂಕ್ ಪರಿಗಣಿಸಬಹುದು ಎಂಬುದನ್ನು ಸಮ್ಮತಿಸುತ್ತೇನೆ/ವೆ. ಈ ವಿಷಯದಲ್ಲಿ ನನ್ನ / ನಮ್ಮ (ಎಲ್ಲಾ ಜಂಟಿ ಹೊಂದಿರುವವರು) ಲಿಖಿತ ಸೂಚನೆಯ ಮೇರೆಗೆ ಮತ್ತು ಮೂಲ ಶಾಖೆಯಲ್ಲಿ ನನ್ನ / ನಮ್ಮಿಂದ ವಹಿವಾಟನ್ನು ಪ್ರಾರಂಭಿಸುವ ಮೂಲಕ ಮಾತ್ರ ಖಾತೆಯ ಸ್ಥಿತಿ 'ಸಕ್ರಿಯ' ಕ್ಕೆ ಬದಲಾಗುತ್ತದೆ ಎಂದು ನಾನು / ನಾವು ಒಪ್ಪುತ್ತೇವೆ. ಖಾತೆಯ ಸ್ಥಿತಿ 'ಡಾರ್ಮೆಂಟ್' ಆಗುವವರೆಗೆ, ಎಟಿಎಂ, ನೆಟ್ ಬ್ಯಾಂಕಿಂಗ್, ಫೋನ್-ಬ್ಯಾಂಕಿಂಗ್‌ನಂತಹ ನೇರ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ವಹಿವಾಟುಗಳನ್ನು ಬ್ಯಾಂಕ್ ಅನುಮತಿಸುವುದಿಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ.

33.

ನಾನು/ನಾವು ಒಂದೇ ಚೆಕ್/ಸೂಚನೆಗಳನ್ನು ನೀಡಿದ್ದರೆ, ನನ್ನ/ನಮ್ಮ ಖಾತೆಗೆ ಡೆಬಿಟ್ ಮಾಡಲು, ಒಂದಕ್ಕಿಂತ ಹೆಚ್ಚು ಡಿಮ್ಯಾಂಡ್ ಡ್ರಾಫ್ಟ್/ಪೇ-ಆರ್ಡರ್ ನೀಡಿದ್ದಕ್ಕಾಗಿ, ನನ್ನ/ನಮ್ಮ ಖಾತೆಯಲ್ಲಿ ಅದೇ ಬಹು ಡೆಬಿಟ್ ಎಂಟ್ರೀಗಳೆಂದು ಪ್ರತಿಫಲಿಸುತ್ತದೆ ಎಂದು ನಾನು/ನಾವು ಒಪ್ಪುತ್ತೇವೆ. 

34.

ಗ್ರಾಹಕರ ನಷ್ಟ ಮತ್ತು ವೆಚ್ಚದಲ್ಲಿ, ಯಾವುದೇ ವ್ಯಕ್ತಿ/ತೃತೀಯ ಸೇವಾ ಪೂರೈಕೆದಾರ/ದಳ್ಳಾಲಿ/ಏಜೆನ್ಸಿಯ ಸೇವೆಗಳಲ್ಲಿ ತೊಡಗಿಸಿಕೊಳ್ಳಲು/ಪಡೆಯಲು ಅಂದರೆ ಸಂಗ್ರಹಣೆಗಳು, ಬಾಕಿ ವಸೂಲಿ, ಭದ್ರತೆಯ ಜಾರಿ, ಗ್ರಾಹಕ/ಸ್ವತ್ತುಗಳ ಯಾವುದೇ ಮಾಹಿತಿಯನ್ನು ಪಡೆಯಲು ಅಥವಾ ಪರಿಶೀಲಿಸಲು, ಮತ್ತು ಯಾವುದೇ ಅಗತ್ಯ ಅಥವಾ ಪ್ರಾಸಂಗಿಕ ಕಾನೂನುಬದ್ಧ ಕಾರ್ಯಗಳು/ಕೆಲಸಗಳು/ವಿಷಯಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಯಾವುದೇ ಉತ್ಪನ್ನಗಳು/ಸೇವೆಗಳು ಬ್ಯಾಂಕ್ ಸರಿ ಎಂದು ಪರಿಗಣಿಸಲು ತನ್ನ ವಿವೇಚನೆಯಿಂದ ಅರ್ಹವಾಗಿರುತ್ತದೆ.

35.

ಗ್ರಾಹಕನು ಸಲ್ಲಿಸಿದ ಅರ್ಜಿ, ಭಾವಚಿತ್ರಗಳು, ಮಾಹಿತಿ ಮತ್ತು ದಾಖಲೆಗಳನ್ನು ಹಿಂತಿರುಗಿಸದೆ ಇರುವ ಹಕ್ಕನ್ನು ಬ್ಯಾಂಕ್ ಹೊಂದಿದೆ. ಗ್ರಾಹಕನಿಗೆ ಯಾವುದೇ ನೋಟೀಸು ಅಥವಾ ಸೂಚನೆಯನ್ನು ನೀಡದೆ ಗ್ರಾಹಕನಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು, ಅಂದರೆ ದಾಖಲೆಗೆ ಸಂಬಂಧಪಟ್ಟ ವಿವರಗಳು, ನೀಡಲಾದ ಉತ್ಪನ್ನ/ಸೇವೆಗಳು, ಡೀಫಾಲ್ಟುಗಳು, ಸೆಕ್ಯೂರಿಟಿ, ಗ್ರಾಹಕನ ಹೊಣೆಗಾರಿಕೆ ಇತ್ಯಾದಿಗಳನ್ನು ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಆಫ್ ಇಂಡಿಯಾ (ಸಿಬಿಲ್) ಮತ್ತು/ಅಥವಾ ಇನ್ನಾವುದೇ ಸರ್ಕಾರಿ/ನಿಯಂತ್ರಕ/ಶಾಸನಬದ್ಧ ಅಥವಾ ಖಾಸಗಿ ಸಂಸ್ಥೆ/ಘಟಕ, ಕ್ರೆಡಿಟ್ ಬ್ಯೂರೋ, ಆರ್ ಬಿಐ, ಬ್ಯಾಂಕುಗಳು ಇತರ ಶಾಖೆಗಳು/ಅಂಗಸಂಸ್ಥೆಗಳು/ಅಂಗಸಂಸ್ಥೆಗಳು/ರೇಟಿಂಗ್ ಏಜೆನ್ಸಿಗಳು, ಸೇವಾ ಪೂರೈಕೆದಾರರು, ಇತರ ಬ್ಯಾಂಕುಗಳು/ಹಣಕಾಸು ಸಂಸ್ಥೆಗಳು, ಯಾವುದೇ ಮೂರನೇ ವ್ಯಕ್ತಿಗಳು, ವರ್ಗಾವಣೆದಾರರ ಯಾವುದೇ ನಿಯೋಜಕರು/ ಸಂಭಾವ್ಯ ನಿಯೋಜಕರಿಗೆ, ಬಹಿರಂಗಪಡಿಸಲು ಪೂರ್ತಿ ಹಕ್ಕು, ಅಧಿಕಾರವನ್ನು ಹೊಂದಿದೆ, ಅಂದರೆ ಇವರಿಗೆ ಮಾಹಿತಿಯ ಅಗತ್ಯವಿರಬಹುದು ಮತ್ತು ಇವರು ಮಾಹಿತಿಯನ್ನು ಪ್ರಕ್ರಿಯೆಗೊಳಿಸಬಹುದು, ಪ್ರಕಟಿಸಬಹುದು/ ಪ್ರಕಟಣೆ ಸೇರಿದಂತೆ ಬ್ಯಾಂಕ್ / ಆರ್‌ಬಿಐ ಅಗತ್ಯವೆಂದು ಪರಿಗಣಿಸಬಹುದಾದ ಮಾಧ್ಯಮದ ಮೂಲಕ ಪ್ರಕಟಿಸಬಹುದು. ಕಾಲಕಾಲಕ್ಕೆ ಉದ್ದೇಶಪೂರ್ವಕ ಡೀಫಾಲ್ಟರ್‌ಗಳ ಪಟ್ಟಿಯ ಭಾಗವಾಗಿ, ಕೆವೈಸಿ ಮಾಹಿತಿ ಪರಿಶೀಲನೆ, ಕ್ರೆಡಿಟ್ ರಿಸ್ಕ್ ವಿಶ್ಲೇಷಣೆ ಅಥವಾ ಇತರ ಸಂಬಂಧಿತ ಉದ್ದೇಶಗಳಿಗಾಗಿ ಸಹ ಬಳಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕನು ಗೌಪ್ಯತೆ ಮತ್ತು ಗೌಪ್ಯತಾ ಒಪ್ಪಂದದ ಸೌಲಭ್ಯವನ್ನು ತ್ಯಜಿಸಬೇಕಾಗುತ್ತದೆ. ಗ್ರಾಹಕರ ಯಾವುದೇ ಒಪ್ಪಿಗೆಯಿಲ್ಲದೆ ಅಥವಾ ಸೂಚನೆ ಇಲ್ಲದೆ, ಇತರ ಬ್ಯಾಂಕುಗಳು/ಹಣಕಾಸು ಘಟಕಗಳು/ಕ್ರೆಡಿಟ್ ಬ್ಯೂರೋಗಳು, ಗ್ರಾಹಕರ ಉದ್ಯೋಗದಾತ/ಕುಟುಂಬ ಸದಸ್ಯರು, ಯಾವುದೇ ಇತರ ವ್ಯಕ್ತಿಗಳಿಂದ ಸಂಪರ್ಕಿಸಲು, ವಿಚಾರಣೆ ಮಾಡಲು, ಮಾಹಿತಿಯನ್ನು ಪಡೆದುಕೊಳ್ಳಲು, ಗ್ರಾಹಕರಿಗೆ, ಟ್ರ್ಯಾಕ್ ರೆಕಾರ್ಡ್, ಕ್ರೆಡಿಟ್ ಅಪಾಯವನ್ನು ನಿರ್ಣಯಿಸಲು ಅಥವಾ ಗ್ರಾಹಕರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಅಥವಾ ಗ್ರಾಹಕರಿಂದ ಬಾಕಿ ವಸೂಲಿ ಮಾಡುವ ಉದ್ದೇಶಕ್ಕಾಗಿ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಲು ಬ್ಯಾಂಕ್‌ಗೆ ಹಕ್ಕಿದೆ.


36.

ಯಾವುದೇ ವೈಯಕ್ತಿಕ ಅಥವಾ ಸೂಕ್ಷ್ಮ ಮಾಹಿತಿಯನ್ನು ಬ್ಯಾಂಕ್ ಸಂಗ್ರಹಿಸಿದ್ದರೆ, www.hdfcbank.com  ಎಂಬ ಬ್ಯಾಂಕ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ಗೌಪ್ಯತಾ ನೀತಿಯ ಪ್ರಕಾರ ಅದನ್ನು ನಿರ್ವಹಿಸಲಾಗುವುದು. 

37.

ಗುಣಮಟ್ಟ ನಿಯಂತ್ರಣ ಉದ್ದೇಶಗಳಿಗಾಗಿ ಗ್ರಾಹಕರೊಂದಿಗೆ ನಡೆಸಿದ ಫೋನ್ ಸಂವಹನಗಳನ್ನು ರೆಕಾರ್ಡ್ ಮಾಡುವ ಹಕ್ಕನ್ನು ಬ್ಯಾಂಕ್ ಹೊಂದಿದೆ.

38.

ಡಾಕ್ಯುಮೆಂಟೇಷನ್ ಮತ್ತು ಖಾತೆ ತೆರೆಯುವ ಅರ್ಜಿಯನ್ನು ನೀಡಿದ್ದರೂ ಕೂಡ ನಿಮ್ಮ ಅರ್ಜಿಯನ್ನು ಸ್ವೀಕರಿಸುವ/ನಿರಾಕರಿಸುವ ಹಕ್ಕನ್ನು ಹೊಂದಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಬ್ಯಾಂಕಿನ ನಿರ್ಧಾರ ಅಂತಿಮವಾಗಿರುತ್ತದೆ.


39.

ಯಾವುದೇ ಸಾಲಗಳು/ಸೌಲಭ್ಯಗಳು, ಇತರ ಬ್ಯಾಂಕಿಂಗ್ ಉತ್ಪನ್ನಗಳನ್ನು ಇಂಟರ್ನೆಂಟ್ ಬ್ಯಾಂಕಿಂಗ್ ವೇದಿಕೆ ಅಥವಾ ಬ್ಯಾಂಕ್ ನ ತತ್ಸಮಾನ ವೇದಿಕೆ (ಗ್ರಾಹಕ/ಸಾಲಪಡೆಯುವವರು ಕಸ್ಟಮರ್/ಲಾಗ್-ಇನ್ ಐಡಿ ಮತ್ತು ಪಾಸ್ವರ್ಡನ್ನು ಬಳಸಿ ಪ್ರವೇಶಿಸಬಹುದಾದ/ವೀಕ್ಷಿಸಬಹುದಾದ ವೇದಿಕೆಗಳು)ಯನ್ನು ಲಭ್ಯವಾಗಿಸಬಹುದು ಮತ್ತು ಬ್ಯಾಂಕ್ ಇಂತರ ವೇದಿಕೆಯನ್ನು ಗ್ರಾಹಕ/ಸಾಲಪಡೆದಿರುವವರಿಗೆ ಆನ್ಲೈನ್ ಅರ್ಜಿಯನ್ನು ಪೂರ್ತಿಗೊಳಿಸುವ ಸೌಲಭ್ಯ ಹಾಗೂ ಸಾಲ ದಾಖಲೆಗಳನ್ನು ಆನ್ಲೈನ್ ನಲ್ಲಿ ಮಾಡಲು/ಪ್ರವೇಶಿಸಲು ಬಳಸಬಹುದು. ಇಂಟರ್ನೆಟ್ ಬ್ಯಾಂಕಿಂಗ್ ನ ಪ್ರತಿ ಬಳಕೆ ಅಥವಾ ಇತರ ಇದೇ ರೀತಿಯ ವೇದಿಕೆ ಅಂತಹ ಗ್ರಾಹಕ ಐಡಿಯನ್ನು ಮತ್ತು ಪಾಸ್ವರ್ಡನ್ನು ಬಳಸಿಕೊಂಡು, ಕಾಲ ಕಾಲಕ್ಕೆ ಆನ್ಲೈನ್ ಸಾಲ ಪ್ರಕ್ರಿಯೆಯನ್ನು ಒಳಗೊಂಡಂತೆ  ವೈಯಕ್ತಿವಾಗಿ ಗ್ರಾಹಕ/ಸಾಲಪಡೆಯುವವನು ಸ್ವತಃ ಬಳಸಿ ಕಾರ್ಯಾಚರಣೆ ನಡೆಸುವಂತಿರಬೇಕು ಮತ್ತು ಪಾಸ್ವರ್ಡ್ ನ ಯಾವುದೇ ನಷ್ಟ, ಕಳವು, ಹ್ಯಾಕಿಂಗ್ ಇತ್ಯಾದಿಗಳನ್ನು ಭರಿಸಲು ದೈಹಿಕ ಮತ್ತು ಮಾನಸಿಕ ಸ್ಥಿರ ಸ್ಥಿತಿಯಲ್ಲಿರಬೇಕು; ಮತ್ತು ಬ್ಯಾಂಕ್ ಯಾವುದೇ ಸಮಯದಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಯನ್ನು ನಿರ್ವಹಿಸುವ ವ್ಯಕ್ತಿಯ ಗುರುತು ಅಥವಾ ಅವನ ಮಾನಸಿಕ ಅಥವಾ ದೈಹಿಕ ಸ್ಥಿರತೆಯನ್ನು ಪರಿಶೀಲಿಸುವ ಅಗತ್ಯವಿಲ್ಲ.  

40.

ಬ್ಯಾಂಕ್ ಖಾತೆಗೆ ಲಿಂಕೇಜ್ ಮಾಡಲು ಆಧಾರ ವಿವರಗಳನ್ನು ಸಲ್ಲಿಸುವ ಮೂಲಕ ಗ್ರಾಹಕನು ಈ ಕೆಳಗಿನ ನಿಯಮಗಳು ಮತ್ತು ಷರತ್ತುಗಳಿಗೆ ಸಮ್ಮತಿಸುತ್ತಾನೆ:

ಭಾರತ ಸರ್ಕಾರ ನೀಡಿದ ರೀತಿಯಲ್ಲಿ ನನ್ನ ಆಧಾರ್ ಸಂಖ್ಯೆಯನ್ನು ನಾನು ಈ ಮೂಲಕ ಸಲ್ಲಿಸುತ್ತೇನೆ; ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಮತ್ತು ನನ್ನ ವೈಯಕ್ತಿಕ ಸಾಮರ್ಥ್ಯದಲ್ಲಿ ಮತ್ತು/ಅಥವಾ ಅಧಿಕೃತ ಸಹಿಗಾರನಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ನಿರ್ವಹಿಸಲಾಗಿರುವ ನನ್ನ ಎಲ್ಲಾ ಖಾತೆಗಳು/ಸಂಬಂಧಗಳಿಗೆ (ಅಸ್ತಿತ್ವದಲ್ಲಿರುವ ಮತ್ತು ಹೊಸ) ಲಿಂಕ್ ಮಾಡಲು ಸ್ವಯಂಪ್ರೇರಣೆಯಿಂದ ನನ್ನ ಒಪ್ಪಿಗೆಯನ್ನು ನೀಡುತ್ತೇನೆ. ನಿಗದಿತ ಉಳಿತಾಯ ಖಾತೆಯಲ್ಲಿ ಭಾರತ ಸರ್ಕಾರದಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಸ್ವೀಕರಿಸಲು ನನಗೆ ಅನುವು ಮಾಡಿಕೊಡಲು ನನ್ನ ಆಧಾರ್ ಸಂಖ್ಯೆಯನ್ನು ಎನ್‌ಪಿಸಿಐನಲ್ಲಿ ನಕ್ಷೆ ಮಾಡಲು ನಾನು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಅಧಿಕಾರ ನೀಡುತ್ತೇನೆ. ಒಂದಕ್ಕಿಂತ ಹೆಚ್ಚು ಬೆನಿಫಿಟ್ ವರ್ಗಾವಣೆ ನನಗೆ ಬಾಕಿಯಿದ್ದಲ್ಲಿ ಈ ಖಾತೆಯಲ್ಲಿ ನಾನು ಎಲ್ಲಾ ಬೆನಿಫಿಟ್ ವರ್ಗಾವಣೆಗಳನ್ನು ಪಡೆಯುತ್ತೇನೆ ಎಂಬುದು ನನಗೆ ಅರ್ಥವಾಗುತ್ತದೆ. ಇಲ್ಲಿ ತಿಳಿಸಲಾದ ಆಧಾರ್ ಸಂಖ್ಯೆಯನ್ನು ಹೊಂದಿರುವ ನಾನು ನನ್ನ ಆಧಾರ್ ಸಂಖ್ಯೆ, ಹೆಸರು ಮತ್ತು ಬೆರಳಚ್ಚುಗಳು/ಐರಿಸ್ ಮತ್ತು ನನ್ನ ಆಧಾರ್ ವಿವರಗಳ ಪಡೆದು ಆಧಾರ್ ಕಾಯ್ದೆ, 2016 ಹಾಗೂ ಅನ್ವಯವಾಗುವ ಎಲ್ಲಾ ಕಾನೂನಿನ ಪ್ರಕಾರ ಯೂಐಡಿಎಐ ನೊಂದಿಗೆ ದೃಢೀಕರಿಸಿ ಬಳಸಿಕೊಳ್ಳಲು ಎಚ್‌ಡಿಎಫ್‌ಸಿ ಬ್ಯಾಂಕ್ ಗೆ ಸ್ವಯಂಪ್ರೇರಣೆಯಿಂದ ಸಮ್ಮತಿಸುತ್ತೇನೆ. ಎಚ್‌ಡಿಎಫ್‌ಸಿ ಬ್ಯಾಂಕ್ ನನ್ನ ಆಧಾರ್ ವಿವರಗಳನ್ನು ಮತ್ತು ಗುರುತಿನ ಮಾಹಿತಿಯನ್ನು ಜನಸಂಖ್ಯಾ ದೃಢೀಕರಣ, ವ್ಯಾಲಿಡೇಷನ್, ಇ-ಕೆವೈಸಿ ಉದ್ದೇಶ, ಓಟಿಪಿ ದೃಢೀಕರಣದ ಉದ್ದೇಶಕ್ಕೆ ಮಾತ್ರ ಬಳಸುತ್ತದೆ: ಅಂದರೆ ಇದು ಬ್ಯಾಂಕಿಂಗ್ ಸೇವೆಗಳು, ನನ್ನ ಖಾತೆಗಳ/ಸಂಬಂಧಗಳ ಕಾರ್ಯಾಚರಣೆ ಮತ್ತು ಸಬ್ಸಿಡಿಗಳನ್ನು ವಿತರಣೆ, ಲಾಭಗಳು ಮತ್ತು ಸೇವೆಗಳು ಮತ್ತು/ಅಥವಾ ಬ್ಯಾಂಕಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದ ಯಾವುದೇ ಕಾರ್ಯಾಚರಣೆಗಳನ್ನು ಒಳಗೊಂಡಿರುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ನನಗೆ ತಿಳಿಸಿರುವುದೇನೆಂದರೆ, ನನ್ನ ಬಯೋಮೆಟ್ರಿಕ್ಸ್ ಅನ್ನು ಸಂಗ್ರಹಿಸಲಾಗುವುದಿಲ್ಲ/ಹಂಚಿಕೊಳ್ಳಲಾಗುವುದಿಲ್ಲ ಮತ್ತು; ಸೆಂಟ್ರಲ್ ಐಡೆಂಟೀಸ್ ಡೇಟಾ ರಿಪಾಸಿಟರಿ (ಸಿಐಡಿಆರ್) ಗೆ ದೃಢೀಕರಣ ಉದ್ದೇಶಕ್ಕೆ ಮಾತ್ರ ಸಲ್ಲಿಸಲಾಗುವುದು. ಮೇಲೆ ತಿಳಿಸಿಲಾದ ಉದ್ದೇಶವನ್ನು ಹೊರತುಪಡಿಸಿ ಇತರ ಯಾವುದೇ ಉದ್ದೇಶಗಳಿಗೆ ನಾನು ಸಲ್ಲಿಸಿದ ಮಾಹಿತಿಯನ್ನು ಬ್ಯಾಂಕ್ ಬಳಸಿಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗಿದೆ. ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದಲ್ಲಿ ತೆರೆಯಬಹುದಾದ ನನ್ನ ಎಲ್ಲಾ ಖಾತೆಗಳಿಗೆ/ ಬ್ಯಾಂಕಿನೊಂದಿಗಿನ ಸಂಬಂಧಗಳಿಗೆ ನನ್ನ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು ನಾನು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಅಧಿಕಾರ ನೀಡುತ್ತೇನೆ. ನಾನು ಒದಗಿಸಿದ ಯಾವುದೇ ತಪ್ಪಾದ ಮಾಹಿತಿಯ ಸಂದರ್ಭದಲ್ಲಿ ನಾನು ಎಚ್‌ಡಿಎಫ್‌ಸಿ ಬ್ಯಾಂಕ್ ಅಥವಾ ಅದರ ಯಾವುದೇ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ.